ಮುಖ್ಯ ಪುಟ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಿಕಿಪೀಡಿಯಕ್ಕೆ ಸ್ವಾಗತ!

ಕನ್ನಡ ವಿಕಿಪೀಡಿಯ ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ

ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ೨೩,೦೩೮ ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ.


ವಿಶೇಷ ಸೂಚನೆ: ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲಿ ಮಾತ್ರ ಬರೆಯಿರಿ.

ವಿಶೇಷ ಲೇಖನ

ಭಾರತದ ಸಂವಿಧಾನವು ಭಾರತದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಈ ಸಂವಿಧಾನವು ಡಿಸೆಂಬರ್ ೯, ೧೯೪೭ ರಿಂದ ನವೆಂಬರ್ ೨೬, ೧೯೪೯ರ ಮಧ್ಯ ಭಾರತದ ಸಂವಿಧಾನ ರಚನಾ ಸಭೆಯಿಂದ ರಚನೆಗೊಂಡು, ಜನವರಿ ೨೬, ೧೯೫೦ರಂದು ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ ಪ್ರತಿವರ್ಷ ಜನವರಿ ೨೬ ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ೪೪೪ ವಿಧಿಗಳನ್ನೂ, ೧೦ (ನಂತರ ೧೨) ಅನುಚ್ಛೇದಗಳನ್ನೂ, ಅನೇಕ ತಿದ್ದುಪಡಿಗಳನ್ನೂ ಹೊಂದಿರುವ ಈ ಸಂವಿಧಾನವು ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತ ದೀರ್ಘವಾದುದ್ದು. ಈ ಸಂವಿಧಾನದ ಆಂಗ್ಲ ಭಾಷೆಯ ಆವೃತ್ತಿಯು ೧,೧೭,೩೬೯ ಶಬ್ದಗಳನ್ನು ಹೊಂದಿದೆ.

ಸಂವಿಧಾನವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ. ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ. ಸಂವಿಧಾನವು ದೇಶದ ಎಲ್ಲ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರವು ಮಾಡುವ ಪ್ರತಿಯೊಂದು ಕಾನೂನೂ ಸಂವಿಧಾನಕ್ಕೆ ಅನುಗುಣವಾಗಿರಬೇಕು.

« ಹಿಂದಿನ ಸಂಚಿಕೆ | ಹಳೆಯ ಸಂಚಿಕೆಗಳು »

ನಮ್ಮ ಹೊಸ ಲೇಖನಗಳಿಂದ...


ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:

  • ಗಂಟಲು ಕಶೇರುಕ ಅಂಗರಚನಾಶಾಸ್ತ್ರದಲ್ಲಿ, ಗಂಟಲು ಎಂದರೆ ಕುತ್ತಿಗೆಯ ಮುಂಭಾಗ, ಮತ್ತು ಕಶೇರುಖಂಡದ ಮುಂದೆ ಸ್ಥಿತವಾಗಿರುತ್ತದೆ. ಇದು ಗ್ರಸನಕೂಪ ಮತ್ತು ಗಂಟಲಗೂಡನ್ನು ಹೊಂದಿರುತ್ತದೆ. ಕಿರುನಾಲಿಗೆಯು ಇದರ ಒಂದು ಪ್ರಮುಖ ವಿಭಾಗವಾಗಿದೆ.
  • ಎಎಸ್9100 ವ್ಯಾಪಕವಾಗಿ ಅಳವಡಿಸಿಕೊಳ್ಳಲಾದ ವೈಮಾನಿಕ ಉದ್ಯಮದ ಪ್ರಮಾಣೀಕೃತ ಗುಣಮಟ್ಟ ನಿರ್ವಹಣೆ ವ್ಯವಸ್ಥೆ. ಇದು ಅಕ್ಟೋಬರ್ ೧೯೯೯ ರಲ್ಲಿ ಆಟೋಮೋಟಿವ್ ಎಂಜಿನಿಯರ್ಸ್ ಸೊಸೈಟಿ ಮತ್ತು ಯುರೋಪಿಯನ್ ಅಸೋಸಿಯೇಷನ್ ಏರೋಸ್ಪೇಸ್ ಇಂಡಸ್ಟ್ರೀಸ್ ಸೇರಿ ಬಿಡುಗಡೆ ಮಾಡಿದವು .
  • ರೋಸರಿ ಎನ್ನುವುದು ಕೆಥೊಲಿಕ್ ಕ್ರೈಸ್ತ ಸಮುದಾಯದವರು ಪ್ರಾರ್ಥನೆಗಾಗಿ ಹಾಗೂ ಜಪಕ್ಕಾಗಿ ಬಳಸುವ ಮಾಲೆ. ಕೆಥೊಲಿಕ್ ಕ್ರಿಶ್ಚಿಯನ್ನರಿಗೆ ಮಾತೆ ಮರಿಯಾ ಕೊಟ್ಟ ಅದ್ಭುತ ವರ 'ರೋಸರಿ ಎನ್ನಲಾಗಿದೆ.
    ಮಗುವನ್ನು ಕಾಂಗರೂ ರೀತಿಯಲ್ಲೇ ಎದೆಗವಚಿಕಿಕೊಂಡು ನವಜಾತ ಶಿಶುವಿನ ಆರೈಕೆ ಮಾಡುತ್ತಿರುವ ತಾಯಿ
  • ಕಾಂಗರೂ ಕಾಳಜಿ (ಚಿತ್ರಿತ) ಕಾಂಗರೂ ಪ್ರಾಣಿ ತನ್ನ ಮಗುವುನ್ನು ರಕ್ಷಣೆ ಮಾಡಿಕೊಳ್ಳುವ ಮಾದರಿಯಲ್ಲಿಯೇ ತಾಯಂದಿರು ನವಜಾತ ಶಿಶುವನ್ನು ಆರೈಕೆ ಮಾಡುವ ವಿಧಾನವಾಗಿದೆ. ಮಗುವನ್ನು ಕಾಂಗರೂ ರೀತಿಯಲ್ಲೇ ಎದೆಗವುಚುವುದರಿಂದ ನವಜಾತ ಶಿಶುವಿನ ತೂಕದಲ್ಲಿ ಹೆಚ್ಚಳವಾಗಲಿದೆ.
  • ಟೋಯೋಟಾ ಉತ್ಪಾದನಾ ವ್ಯವಸ್ಥೆ (ಟಿಪಿಎಸ್) (Toyota Production System (TPS) ಟೊಯೋಟಾ ಅಭಿವೃದ್ಧಿಪಡಿಸಿದ ನಿರ್ವಹಣಾ ತತ್ವಶಾಸ್ತ್ರ ಮತ್ತು ಅಭ್ಯಾಸಗಳನ್ನು ಒಳಗೊಂದ ಸಮಗ್ರ ತಾಂತ್ರಿಕ ವ್ಯವಸ್ಥೆಯಾಗಿದೆ.

ಸುದ್ದಿಯಲ್ಲಿ

  • ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಕಾಯ್ದೆ 2005, ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಹಕ್ಕನ್ನು ನೀಡುತ್ತದೆ. ಒಡಹುಟ್ಟಿದವರು ಎಂಬ ಅಂಶವೇ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಸಮಾನ ಹಕ್ಕನ್ನು ನೀಡುತ್ತದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.
  • ಫೆಬ್ರುವರಿ ೦೩: ೧೯ ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಭಾರತ ತಂಡ ಚಾಂಪಿಯನ್.
  • ಜನವರಿ ೨೫: ಕರ್ನಾಟಕದ ರಾಜ್ಯದ ೯ ಜನರು ಒಳಗೊಂಡಂತೆ ರಾಷ್ಟ್ರದ ಒಟ್ಟು ೮೫ ಜನ ಸಾಧಕರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ಪುರಸ್ಕಾರ.
  • ಜನವರಿ ೨೩: ಭಾರತದ ಸಂವಿಧಾನದಲ್ಲಿ 'ದಲಿತ' ಎಂಬ ಪದ ಉಲ್ಲೇಖವಾಗಿಲ್ಲ. ಹಾಗಾಗಿ ಈ ಪದದ ಬಳಕೆಯನ್ನು ತಡೆಹಿಡಿಯಬೇಕು. ಅದರ ಬದಲು 'ಪರಿಶಿಷ್ಟ ಜಾತಿ' ಅಥವಾ 'ಪರಿಶಿಷ್ಟ ಪಂಗಡ' ಎಂಬ ಪದ ಬಳಸಬಹುದು ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.
  • ಜನವರಿ ೨೦: ಅಂಧರ ಏಕದಿನ ವಿಶ್ವಕಪ್‌ ಕ್ರಿಕೆಟ್ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಭಾರತ ಅಂಧರ ತಂಡಕ್ಕೆ ಜಯ.

ಗೂಗಲ್ ಡೂಡಲ್ ಗೌರವಿತ ಲೇಖನ/ ವ್ಯಕ್ತಿಗಳ ಲೇಖನಗಳು

ಈ ತಿಂಗಳ ಪ್ರಮುಖ ದಿನಗಳು

ಫೆಬ್ರುವರಿ:

ಲಿಂಕನ್

ವಿಕಿಪೀಡಿಯ ಸಾಧಕರು
ಲೋಕೇಶ ಕುಂಚಡ್ಕ

ನಾವು ಈ ಬಾರಿ ಪರಿಚಯಿಸುತ್ತಿರುವ ವಿಕಿಪೀಡಿಯ ಸಾಧಕರು ಲೋಕೇಶ ಕುಂಚಡ್ಕ.
ಲೋಕೇಶರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಜಾನಪದ ಸಂಶೋಧನೆಯಲ್ಲಿ ತೊಡಗಿದ್ದಾರೆ, ಇವರ ಹುಟ್ಟೂರು ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಂಚಡ್ಕ. ಇದರಿಂದಾಗಿಯೇ ಲೋಕೇಶರ ಹೆಸರಿನ ಜೊತೆ ಕುಂಚಡ್ಕವೂ ಸೇರಿಕೊಂಡಿದೆ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೆಟ್ಟಿಯಲ್ಲಿ ಮುಗಿಸಿ ನಂತರ ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಆಲೆಟ್ಟಿಯಲ್ಲಿಯೇ ಮುಗಿಸಿದರು, ಪದವಿ ಪೂರ್ವ ಶಿಕ್ಷಣವನ್ನು ನೆಹರು ಸ್ಮಾರಕ ಮಹಾವಿದ್ಯಾಲಯ ಸುಳ್ಯದಲ್ಲಿ ಮುಗಿಸಿದರು. ಎನ್ನೆಂಸಿಯಲ್ಲಿ ಕಲಾ ಪದವಿಯನ್ನು ಮುಗಿಸಿ, ಶ್ರೀನಿವಾಸ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕ ತರಬೇತಿಯನ್ನು ಪಡೆದಿದ್ದಾರೆ , ಸ್ನಾತಕೋತ್ತರ ಪದವಿಯನ್ನು ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪೊರೈಸಿದ್ದಾರೆ.
ಲೋಕೇಶರು ಕನ್ನಡ ವಿಕಿಪೀಡಿಯಕ್ಕೆ ೨೦೧೫ರಲ್ಲಿ ಕೊಡುಗೆಯನ್ನು ಪ್ರಾರಂಭಿಸಿದರು. ನಂತರ ತುಳು ವಿಕಿಪೀಡಿಯ ಇಂಕ್ಯುಬೇಟರ್‌ನಲ್ಲಿ ಇರಬೇಕಾದರೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಇಂದು ಇವರು ಕನ್ನಡ ಮತ್ತು ತುಳು ವಿಕಿಪೀಡಿಯದ ಸಕ್ರಿಯ ಸಂಪಾದಕರಾಗಿದ್ದಾರೆ. ಇವರು ಅನೇಕ ಉತ್ತಮ ಲೇಖನಗಳನ್ನು ರಚಿಸಿ ಸದಾ ಕನ್ನಡ ವಿಕಿಪೀಡಿಯದಲ್ಲಿ ನಡೆಯುವ ಕೃತಿ ಚೌರ್ಯ, ಇತರ ಕೆಲಸಗಳ ಮೇಲೆ ಗಮನವಿಟ್ಟು ಕನ್ನಡ ವಿಕಿಪೀಡಿಯದ ಮಾಹಿತಿ ದಕ್ಷತೆ ಹೆಚ್ಚಿಸುವಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ.


ವಿಕಿಪೀಡಿಯ ಪರ್ಯಟನೆ
Map karnataka flag.JPG ಕರ್ನಾಟಕ ಮತ್ತು ಕನ್ನಡ

ಜಿಲ್ಲೆಗಳುತಾಲ್ಲೂಕುಗಳುಪ್ರಮುಖ ಸ್ಥಳಗಳುಇತಿಹಾಸಮುಖ್ಯಮಂತ್ರಿಗಳುಪ್ರಸಿದ್ಧ ವ್ಯಕ್ತಿಗಳುಬೆಂಗಳೂರುಕನ್ನಡ ವ್ಯಾಕರಣಕನ್ನಡ ಪತ್ರಿಕೆಗಳು

Nuvola filesystems www.png ಭೂಗೋಳ

ಭೂಗೋಳಖಂಡಗಳುದೇಶಗಳುನಗರಗಳುಜಲಸಮೂಹಗಳುಪರ್ವತಶ್ರೇಣಿಗಳುಮರುಭೂಮಿಗಳುಭೂಗೋಳ ಶಾಸ್ತ್ರಸೌರಮಂಡಲಖಗೋಳಶಾಸ್ತ್ರ

Nuvola apps kcoloredit.png ಕಲೆ ಮತ್ತು ಸಂಸ್ಕೃತಿ

ಸಂಸ್ಕೃತಿಭಾಷೆಗಳುಸಾಹಿತ್ಯಸಾಹಿತಿಗಳುಸಂಗೀತಸಂಗೀತಗಾರರುಧರ್ಮಜಾನಪದಹಬ್ಬಗಳುಕ್ರೀಡೆಪ್ರವಾಸೋದ್ಯಮರಂಗಭೂಮಿಚಿತ್ರರಂಗಪ್ರಾಚ್ಯ ಸಂಶೋಧಕರು

Nuvola apps kdmconfig.png ಜನ - ಜೀವನ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರುನೊಬೆಲ್ ಪ್ರಶಸ್ತಿ ಪುರಸ್ಕೃತರುಸ್ವಾತಂತ್ರ್ಯ ಹೋರಾಟಗಾರರುಭಾರತ ರತ್ನ ಪುರಸ್ಕೃತರುಜ್ಞಾನಪೀಠ ಪ್ರಶಸ್ತಿ ಪುರಸ್ಕೃತರುಉದ್ಯಮಿಗಳು ಉದ್ಯಮಗಳು

Nuvola apps kworldclock.png ಇತಿಹಾಸ

ಇತಿಹಾಸಐತಿಹಾಸಿಕ ಸ್ಥಳಗಳು-ಸ್ಮಾರಕಗಳುವಿಶ್ವ ಪರಂಪರೆಯ ತಾಣಗಳುಭಾರತದ ಇತಿಹಾಸಕಾಲ

Nuvola apps kalzium.png ವಿಜ್ಞಾನ ಮತ್ತು ತಂತ್ರಜ್ಞಾನ

ವಿಜ್ಞಾನತಂತ್ರಜ್ಞಾನತಂತ್ರಜ್ಞರುವಿಜ್ಞಾನಿಗಳುಖಗೋಳಶಾಸ್ತ್ರಜೀವಶಾಸ್ತ್ರರಸಾಯನಶಾಸ್ತ್ರಭೂಶಾಸ್ತ್ರಭೌತಶಾಸ್ತ್ರಗಣಿತ

ReligiousSymbolsIndian.PNG ಧರ್ಮ ಮತ್ತು ಆಧ್ಯಾತ್ಮಿಕತೆ

ಧರ್ಮಆಧ್ಯಾತ್ಮಹಿಂದೂ ಧರ್ಮಜೈನ ಧರ್ಮಬೌದ್ಧ ಧರ್ಮಇಸ್ಲಾಂ ಧರ್ಮಕ್ರೈಸ್ತ ಧರ್ಮಯಹೂದಿ ಧರ್ಮಸಿಖ್ ಧರ್ಮಧಾರ್ಮಿಕ ಗ್ರಂಥಗಳುಪುರಾಣ

Nuvola filesystems folder home.png ಸಮಾಜ ಮತ್ತು ರಾಜಕೀಯ

ಸಮಾಜರಾಜಕೀಯಶಿಕ್ಷಣಭಾರತದ ರಾಷ್ಟ್ರಪತಿಗಳುಭಾರತದ ಪ್ರಧಾನ ಮಂತ್ರಿಗಳುಸಮಾಜಸೇವಕರುಭಯೋತ್ಪಾದನೆ

Exquisite-xine.png ಕನ್ನಡ ಸಿನೆಮಾ

ಚಲನಚಿತ್ರಗಳುನಿರ್ದೇಶಕರುನಟರುನಟಿಯರುನಿರ್ಮಾಪಕರುಚಿತ್ರ ಸಂಗೀತಚಿತ್ರಸಾಹಿತಿಗಳು

Applications-games.svg ಮನೋರಂಜನೆ ಮತ್ತು ಕ್ರೀಡೆ

ಕ್ರೀಡೆಕ್ರೀಡಾಪಟುಗಳುಕ್ರೀಡಾ ಪ್ರಶಸ್ತಿಗಳುಕ್ರಿಕೆಟ್ಟೆನ್ನಿಸ್ಪ್ರವಾಸದೂರದರ್ಶನ


Emblem of India.svg ಭಾರತದ ಇತರ ನುಡಿಗಳಲ್ಲಿ ವಿಕಿಪೀಡಿಯ



ವಿಕಿಪೀಡಿಯ ಬಳಗದ ಇತರ ಯೋಜನೆಗಳು:
ಮೆಟಾ-ವಿಕಿ 
ಪ್ರಾಜೆಕ್ಟ್ ಸಂಯೋಜನೆ 
ವಿಕಿಮೀಡಿಯ ಕಾಮನ್ಸ್ 
ಮೀಡಿಯಾ ಕಣಜ 
ವಿಕ್ಷನರಿ 
ಶಬ್ದಕೋಶ 
ವಿಕಿ ಬುಕ್ಸ್ 
ಪುಸ್ತಕಗಳು 
ವಿಕಿ ಸೋರ್ಸ್ 
ಮುಕ್ತ ಸಾಹಿತ್ಯ 
ವಿಕಿ ಕೋಟ್ 
ಉಕ್ತಿಗಳು 
ವಿಕಿ ನ್ಯೂಸ್
ಸುದ್ದಿ
ವಿಕಿ ಸ್ಪೀಷೀಸ್
ಜೈವಿಕ ಮಾಹಿತಿ

ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಹೋಸ್ಟ್ ಮಾಡಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದೇಣಿಗೆ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ. ದೇಣಿಗೆ ಪುಟ(ಆಂಗ್ಲ ಭಾಷೆಯಲ್ಲಿ).

"https://kn.wiki.ng/w/index.php?title=ಮುಖ್ಯ_ಪುಟ&oldid=829213" ಇಂದ ಪಡೆಯಲ್ಪಟ್ಟಿದೆ